ಚಿಕ್ಕಬಳ್ಳಾಪುರವು ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ ಇದನ್ನು 2007 ರಲ್ಲಿ ಅಸ್ತಿತ್ವದಲ್ಲಿರುವ ಕೋಲಾರ ಜಿಲ್ಲೆಯಿಂದ ಬೇರ್ಪಡಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯು ಕೃಷಿ ಮತ್ತು ಸಂಬAಧಿತ ಚಟುವಟಿಕೆಗಳಾದ ಹೈನುಗಾರಿಕೆ, ರೇಷ್ಮೆ ಕೃಷಿ ಮತ್ತು ದ್ರಾಕ್ಷಿ ತೋಟಗಾರಿಕೆಗೆ ಪ್ರಮುಖ ತಾಣವಾಗಿದೆ.

ಕೋಮುಲ್ ಅನ್ನು 1987 ರಲ್ಲಿ ಬೆಂಗಳೂರು ಯೂನಿಯನ್ ನಿಂದ ಬೇರ್ಪಡಿಸಲಾಯಿತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 1.65 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಲು ಪ್ರಾರಂಭಿಸಿತು.

ಮೆಗಾ ಡೈರಿಯನ್ನು 2018 ರಲ್ಲಿ 3.೦ ರಿಂದ 5.೦ LLPD ಹಾಲು ಸಂಸ್ಕರಣಾ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಚಿಮುಲ್) ಅನ್ನು ಕೋಲಾರ ಹಾಲು ಒಕ್ಕೂಟದಿಂದ 25.09.2024 ರಂದು ವಿಭಜಿಸಲಾಗಿದೆ. ಚಿಮುಲ್ನಲ್ಲಿ ಒಟ್ಟು ೦6 ತಾಲ್ಲೂಕುಗಳು ಮತ್ತು 994 ಕ್ರಿಯಾತ್ಮಕ ಪ್ರಾಥಮಿಕ ಹಾಲು ಸಹಕಾರ ಸಂಘಗಳನ್ನು ಹೊಂದಿದ್ದು. 125 ಮಹಿಳಾ ಸಂಘಗಳನ್ನು ಒಳಗೊಂಡಿರುತ್ತದೆ ಒಕ್ಕೂಟವು ದಿನಕ್ಕೆ ಸರಾಸರಿ 4.86 ಲಕ್ಷ ಕೆ.ಜಿ ಹಾಲು ಸಂಗ್ರಹಿಸುತ್ತಿದೆ ಮತ್ತು ಬಿ.ಎಂ.ಸಿ ಟ್ಯಾಂಕರ್ಗಳ ಮೂಲಕ ಹಾಲನ್ನು ಸಂಗ್ರಹಿಸಲಾಗುತ್ತಿದೆ.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು ಸುಮಾರು 2.34 ಲಕ್ಷ ಲೀಟರ್ ಹಾಲು ಮಾರಾಟವನ್ನು ಹೊಂದಿದೆ. ಸುಮಾರು 49499 ಕೆ.ಜಿ ಮೊಸರು ಮಾರಾಟವನ್ನು ಹೊಂದಿದೆ.

ಪ್ರತಿ ದಿನ ಪನೀರ್ ಉತ್ಪಾದನೆಗೆ 13,270 ಲೀಟರ್ ಹಾಲು ನೀಡಲಾಗುತ್ತಿದೆ. 93301 ಲೀಟರ್ ಯುಎಚ್ಟಿ ಮತ್ತು ಪ್ಲೆಕ್ಸಿ ಹಾಲು ಉತ್ಪಾದನೆಗೆ 33264 ಲೀಟರ್ ರಷ್ಟು ಹಾಲನ್ನು ನೀಡಲಾಗುತ್ತಿದೆ. ಪ್ರತಿ ವಾರ ಹಾಲು ಉತ್ಪಾದಕರಿಗೆ ಒಕ್ಕೂಟವು 14 ಕೋಟಿರೂಗಳನ್ನು ಪಾವತಿಸುತ್ತಿದೆ.

ಒಕ್ಕೂಟದ ವಿಶೇಷತೆ

  1. ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಒಕ್ಕೂಟವು UHT ಹಾಲುನ್ನು ಪ್ರಾರಂಭಿಸಿತು.
  2. ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು 2001 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಸ್ವಯಂಚಾಲಿತ ಹಾಲು ಸಂಗ್ರಹಣ ಘಟಕ/AMCU ವನ್ನು ಪ್ರಾರಂಭಿಸಿತು ಮತ್ತು ಪ್ರಸ್ತುತ 168 ಸಂಖ್ಯೆ BMC ಕೇಂದ್ರಗಳನ್ನೊಳಗೊಂಡಿರುತ್ತದೆ.
  3. ದೇಶದಲ್ಲಿ ಮೊದಲ ಬಾರಿಗೆ “ಥೈಲೇರಿಯಾ ಲಸಿಕೆ” ಕಾರ್ಯಕ್ರಮದ ಅನಾಷ್ಠಾನಗೊಳಿಸಲಾಗಿದೆ.
  4. ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು 36 ಸಮುದಾಯ ಯಂತ್ರ ಹಾಲು ಕರೆಯುವ ಕೇಂದ್ರಗಳನ್ನು ಒಂದಿರುತ್ತದೆ.
  5. 2003-04 ರಲ್ಲಿ Clean Milk Production ಆನ್ನು ಮೊದಲ ಬಾರಿಗೆ ಪ್ರಾರಂಭಿಸಿದರು.
  6. 2003-04 ರಲ್ಲಿ FMD ಸಾಮೂಹಿಕ ಲಸಿಕೆ ಕಾರ್ಯಕ್ರಮ.

ಚಿಲ್ಲಿಂಗ್ ಸೆಂಟರ್ಗಳು

  1. ಚಿಂತಾಮಣಿ-ಐಸ್ ಕ್ರೀಂ ಘಟಕವಾಗಿ ಪರಿವರ್ತನೆ
  2. ಸಾದಲಿ- KBSಗಾಗಿ ಹಾಲು ಪುಡಿ ಪ್ಯಾಕಿಂಗ್ ಘಟಕ
  3. ಗೌರಿಬಿದನೂರು-ಕಾರ್ಯನಿರ್ವಹಣೆಯಲ್ಲಿದೆ.

ಪ್ರಗತಿಯಲ್ಲಿರುವ ಯೋಜನೆಗಳು

ಚಿಂತಾಮಣಿಯಲ್ಲಿ ಐಸ್ ಕ್ರೀಂ ಘಟಕ ಸಾಮರ್ಥ್ಯ 10 ರಿಂದ 15 TLPD

ಭವಿಷ್ಯದ ಯೋಜನೆಗಳು

ಹಾಲು ಪ್ರೊಸೆಸಿಂಗ್ ಮತ್ತು ಪ್ಯಾಕಿಂಗ್ ಘಟಕ - 8 LLPD ರಿಂದ 10.5 LLPD

ಸಾದನೆಗಳು

  1. 29.07.2025 ರಲ್ಲಿ ದಾಖಲೆಯ 2.61 ಲಕ್ಷ ಲೀಟರ್ ಸ್ಯಾಚೆಟ್ ಹಾಲು ಮಾರಾಟವಾಗಿದೆ.
  2. 04.10.2025 ರಲ್ಲಿ ದಾಖಲೆಯ 2.86 ಲಕ್ಷ ಲೀಟರ್ UHT ಹಾಲು ಮಾರಾಟವಾಗಿದೆ.

ಪ್ರಶಸ್ತಿಗಳು

2021 ಸಾಲಿನಲ್ಲಿ ಒಕ್ಕೂಟಕ್ಕೆ “Quality Mark” ಪ್ರಶಸ್ತಿಯನ್ನು NDDBಯವರು ನೀಡಿ ಗೌರವಿಸಲಾಯಿತು.