• ಒಕ್ಕೂಟದ ವತಿಯಿಂದ ಶೇ.50 ರರಿಯಾಯಿತಿದರದಲ್ಲಿ ಮೇವಿನ ಬೀಜಗಳಾದ ಎ.ಟಿ ಮುಸುಕಿನ ಜೋಳ, ಸಿ.ಎಸ್.ಎಚ್-24 ಜೋಳ, ಕುದುರೆ ಮಸಾಲೆ, ಸಿ.ಓ.ಎಫ್.ಎಸ್-29 ಜೋಳವನ್ನು ಹಾ.ಲು.ಉ.ಸ.ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ವಿತರಿಸಲಾಗುತ್ತಿದೆ.
  • ದಾರಿತ ನೇಪಿಯರ್ ಹುಲ್ಲುಗಳಾದ ಸೂಪರ್ ನೇಪಿಯರ್ ಹಾಗೂ ತೈವಾನ್ ನೇಪಿಯರ್ ಮತ್ತುರೆಡ್ ನೇಪಿಯರ್ ಕಾಂಡಗಳನ್ನು ಎಕರೆಗೆ 400/- ರೂಗೆ ವಿತರಿಸಲಾಗಿದೆ.
  • ಮೇವಿನ ಮರಗಳಾದ ನುಗ್ಗೆ ಮತ್ತು ಅಗಸೆ ಸಸಿಗಳನ್ನು ನರ್ಸರಿಯಲ್ಲಿ ಸಿದ್ದಪಡಿಸಿ ರೂ.3/- ರಂತೆ ಹಾಲು ಉತ್ಪಾದಕರಿಗೆ ವಿತರಿಸಲಾಗುತ್ತದೆ.
  • ಹಸಿರು ಮೇವನ್ನು ಸಂರಕ್ಷಿಸಿ ಶೇಖರಿಸಿಡಲು ರಸಮೇವು ತೊಟ್ಟಿಗಳನ್ನು ನಿರ್ಮಿಸಿಕೊಳ್ಳಲು ಹಾಲು ಉತ್ಪಾದಕರಿಗೆ 15000/- ರೂಗಳನ್ನು ಅನುದಾನ ನಿಡಲಾಗುತ್ತಿದೆ, ಹಾಗೆಯೆ ಶೇ.50 ರರಿಯಾಯಿತಿದರದಲ್ಲಿ ಸೈಲೆಜ್ ಬ್ಯಾಗ್ ನಿಡಾಲಾಗುತ್ತದೆ.
  • ಪ್ರೋಟಿನ್‌ನಖಣಜಎಂದೆಕರೆಯಲ್ಪಡುವಅಜೋಲ್ಲಾಘಟಕವನ್ನು ನಿರ್ಮಿಸಲು ರೂ.3000/- ರಂತೆಅನುದಾನ ನೀಡಲಾಗುತ್ತಿದೆ.
  • ಹಾಲು ಉತ್ಪಾದಕರಿಗೆ ಮೇವು ಮತ್ತು ಪಶು ಆಹಾರ ತಂತ್ರಜ್ಙಾನಗಳು ಹಾಗೂ ಸುದಾರಿತ ಕ್ರಮಗಳನ್ನು ತಿಳಿಸಿಕೊಡಲು ಅರಿವುಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
  • ಹಸಿರು ಮೇವು ಬೆಳದ ನೀರಾವರಿವುಳ್ಳ ರೈತರಿಗೆ ಹಸಿರು ಮೇವು ಅಭಿವೃದ್ಧಿಯೋಜನೆ ಅಡಿ ಪ್ರತಿಎಕರೆಗೆ ರೂ.3500/- ಗಳಂತೆ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತಿದೆ.